Monday, June 18, 2012


  • ದೋಷವನ್ನು ಹುಡುಕುವುದು ಸುಲಭ ಆದರೆ ಅದನ್ನು ಸರಿಪಡಿಸುವುದು ಕಠಿಣ"
  • ಜ್ಞಾನವಂತನಾದ ಮಿತ್ರನು ಜೀವನದ ಬಹುದೊಡ್ಡ ವರದಾನ.
  • ಬೇರೆಯವರನ್ನು ಆಡಿಕೊಂಡು ನೋಡಿ ನಗುವ ಮೊದಲು, ನಿನ್ನನ್ನು ನೀನು ಆಡಿಕೊಂಡು ನಗು.
  • ಸತ್ಯ ಮತ್ತು ನ್ಯಾಯವನ್ನು ಸಮರ್ಥನೆ ಮಾಡಿಕೊಳ್ಳುವುದು ಮನುಷ್ಯನ ಸಭ್ಯತೆ ಹಾಗೂ ಸಜ್ಜನಿಕೆಯ ಒಂದು ಅಂಗ.
  • ಸಮುದ್ರದಲ್ಲಿ ಸುರಿದ ಮಳೆ, ಹಸಿವಿಲ್ಲದವನಿಗೆ ನೀಡಿದ ಭೋಜನ, ಧನವಂತನಿಗೆ ಕೊಟ್ಟ ದಾನ, ದರಿದ್ರನಿಗೆ ಬಂದ ಯೌವನ ಇವೆಲ್ಲ ವ್ಯರ್ಥವೇ ಸರಿ.
  • ಮನಸ್ಸಿನಲ್ಲಿ ಭಗವಂತನ ಆಲೋಚನೆ, ನುಡಿಯಲ್ಲಿ ಆತನ ಗುಣಗಾನ, ಕ್ರಿಯೆಯಲ್ಲಿ ಪವಿತ್ರ ಕಾಯಕ ಇದೇ ದೈವ ಸಾಕ್ಷಾತ್ಕಾರದ ಮೂಲ.

No comments:

Post a Comment